ಬಿಹಾರ, ಏ 22 (DaijiworldNews/DB): ಮೇವು ಹಗರಣಕ್ಕೆ ಸಂಬಂಧಿಸಿದ 5ನೇ ಪ್ರಕರಣದಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ಮಂಜೂರಾಗಿದೆ.
ಡೊರಂಡಾ ಖಜಾನೆ ಮೇವು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ.
ಸುಮಾರು139.5 ಕೋಟಿ ರೂ. ಮೌಲ್ಯದ ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥ ಎಂಬುದಾಗಿ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ಉಲ್ಲೇಖಿಸಿ ಶರಣಾಗುವಂತೆ ಸೂಚನೆ ನೀಡಿತ್ತು. ಇದು ಕೊನೆಯ ಪ್ರಕರಣವೂ ಆಗಿತ್ತು. ಆದರೆ, ಲಾಲೂ ಪರ ವಕೀಲರು ವಾದ ಮಂಡಿಸಿ ಈಗಾಗಲೇ ಲಾಲೂ ಐದು ವರ್ಷಗಳನ್ನು ಜೈಲು ಶಿಕ್ಷೆಯಲ್ಲಿ ಕಳೆದಿದ್ದಾರೆ. ಅಲ್ಲದೆ ಅವರಿಗೆ ಅನಾರೋಗ್ಯ ಕಾಡುತ್ತಿದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು. ಈ ವಾದವನ್ನು ಪರಿಗಣಿಸಿ ನ್ಯಾಯಾಲಯವು ಜಾಮೀರು ಮಂಜೂರು ಮಾಡಿದೆ. ಆ ಮೂಲಕ ಐದನೇ ಪ್ರಕರಣದಲ್ಲಿಯೂ ಅವರಿಗೆ ಜಾಮೀನು ಸಿಕ್ಕಂತಾಗಿದೆ.
ಮೇವು ಹಗರಣ ಪ್ರಕರಣದಲ್ಲಿ 99 ಆರೋಪಿಗಳ ಪೈಕಿ 24 ಮಂದಿ ಖುಲಾಸೆಗೊಂಡಿದ್ದು, 46 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.