ನವದೆಹಲಿ, ಏ 22 (DaijiworldNews/MS): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
" ತನಿಖೆಗೆ ಅಡ್ಡಿಪಡಿಸಲು ಇದು ತುಂಬಾ ಹೊಸ ಹಂತವಾಗಿದೆ. ಈ ಹಂತದಲ್ಲಿ ನಾವು ಸರಿಯಾದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ವಿಚಾರಣಾಧೀನ ನ್ಯಾಯಾಲಯದಲ್ಲೇ ಜಾಮೀನು ಅರ್ಜಿ ಸಲ್ಲಿಸುವಂತೆ ಮಲೀಕ್ ಗೆ ಕೋರ್ಟ್ ಸೂಚಿಸಿದೆ.
ಹಿರಿಯ ಅಡ್ವೊಕೇಟ್ ಕಪಿಲ್ ಸಿಬಲ್ ಮಲೀಕ್ ಪರ ವಾದ ಮಂಡಿಸಿದ್ದು, 1999 ರಲ್ಲಿ ನಡೆದ ಅಪರಾಧವೊಂದಕ್ಕೆ 2022 ರಲ್ಲಿ ಮಲೀಕ್ ಅವರನ್ನು ಬಂಧಿಸಿದ್ದನ್ನು ಪ್ರಶ್ನಿಸಿದ್ದರು ಜಾರಿ ನಿರ್ದೇಶನಾಲಯ ಎನ್ ಸಿಪಿ ನಾಯಕನನ್ನು ಫೆ.23 ರಂದು ಬಂಧಿಸಿತ್ತು. ಭೂಗತ ಜಗತ್ತು ಹಾಗೂ ದಾವೂದ್ ಇಬ್ರಾಹಿಮ್'ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿತ್ತು.