ನವದೆಹಲಿ, ಏ 22 (DaijiworldNews/MS): 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಬಯೋಲಾಜಿಕಲ್ ಇ ಕೋವಿಡ್-19 ಲಸಿಕೆ ಕಾರ್ಬೆವಾಕ್ಸ್ ತುರ್ತು ಬಳಕೆಯ ಅಧಿಕಾರವನ್ನು ನೀಡಲು ಭಾರತದ ಉನ್ನತ ಔಷಧ ಪ್ರಾಧಿಕಾರದ ಪರಿಣಿತ ಸಮಿತಿ ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಮೂಲಗಳ ಪ್ರಕಾರ, ಎರಡರಿಂದ 11 ವರ್ಷ ವಯಸ್ಸಿನವರಲ್ಲಿ ಕೋವಾಕ್ಸಿನ್ ಬಳಕೆಗಾಗಿ ಅದರ ತುರ್ತು ಬಳಕೆಗಾಗಿ ಅದರ ತುರ್ತು ಬಳಕೆಯ ಅಧಿಕಾರ (EUA) ವನ್ನು ಪರಿಶೀಲಿಸಲು ಭಾರತ್ ಬಯೋಟೆಕ್ನಿಂದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ವಿಷಯ ತಜ್ಞರ ಸಮಿತಿ (SEC),ಹೆಚ್ಚಿನ ಮಾಹಿತಿಯನ್ನು ಕೋರಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ವಯಸ್ಕರಲ್ಲಿ ತುರ್ತು ಬಳಕೆಗಾಗಿ ನಿರ್ಬಂಧ ಹಾಗೂ ಷರತ್ತುಗಳೊಂದಿಗೆ ಕೋವಾಕ್ಸಿನ್ ಲಸಿಕೆ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಸಿಜಿಐ) ಅನುಮತಿ ನೀಡಿತ್ತು
ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಔಷಧೀಯ ಕಂಪನಿ ಬಯೋಲಾಜಿಕಲ್ ಇ ಲಸಿಕೆ ಕಾರ್ಬೆವಾಕ್ಸ್ ನ್ನು 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲು ಬಳಸಲಾಗುತ್ತಿದೆ. ಡಿಸೆಂಬರ್ 24, 2021 ರಂದು 12 ರಿಂದ 18 ವರ್ಷ ವಯಸ್ಸಿನವರಿಗೆ ಕೋವಾಕ್ಸಿನ್ ನ್ನು ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.
ಮಾರ್ಚ್ 16 ರಂದು 12-14 ವರ್ಷದೊಳಗೆ ಮಕ್ಕಳಿಗೆ ಲಸಿಕೆಯನ್ನು ದೇಶದಲ್ಲಿ ಆರಂಭಿಸಲಾಯಿತು. ಇಲ್ಲಿಯವರೆಗೂ 2.53 ಕೋಟಿ ಮಕ್ಕಳಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದೆ.