ರಾಂಚಿ, , ಏ 21 (DaijiworldNews/DB): ಜಾರ್ಖಂಡ್ ಗಿರಿದಿಹ್ ಜಿಲ್ಲೆಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧಿಸಿದಂತೆ ಅಭ್ಯರ್ಥಿ ಸಹಿತ ಮೂವರನ್ನು ಬಂಧಿಸಲಾಗಿದೆ.
ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಗಿರಿದಿಹ್ ಜಿಲ್ಲೆಯ ಗಂಡೆ ಬ್ಲಾಕ್ನಲ್ಲಿ ಅಭ್ಯರ್ಥಿ ಶಾಕಿರ್ ನಾಮಪತ್ರ ಸಲ್ಲಿಕೆಗೆ ತೆರಳುವಾಗ ಆಯೋಜಿಸಿದ್ದ ಮೆರವಣಿಗೆಯಲ್ಲಿ ಆತನ ಬೆಂಬಲಿಗರು ಪಾಕ್ ಪರ ಘೋಷಣೆಗಳನ್ನು ಕೂಗಿರುವ ವೀಡಿಯೋ ವೈರಲ್ ಆಗಿದೆ. ಘೋಷಣೆ ಕೂಗಿರುವುದನ್ನು ಗಾಂಡೇಯ ಸರ್ಕಲ್ ಆಫೀಸರ್ ರಫಿ ಆಲಂ ಮತ್ತು ಗಂಡೆ ಠಾಣೆ ಪ್ರಭಾರಿ ಹಸನೈನ್ ಖಚಿತಪಡಿಸಿದ್ದು, ಆರೋಪಿಗಳ ಪೈಕಿ ಶಾಕಿರ್ ಸೇರಿದಂತೆ ಮೂವರನ್ನು ಪೊಲೀಸರು ಬಂದಿಸಿದ್ದಾರೆ.
ಎಫ್ಐಆರ್ನಲ್ಲಿ ಒಟ್ಟು 10 ಜನರ ಹೆಸರಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.