ಶಿವಮೊಗ್ಗ, ಏ 21 (DaijiworldNews/DB): ನಿಗದಿತ ಸಮಯದಲ್ಲಿ ಶ್ರಮವಹಿಸಿ ಕೆಲಸ ಮಾಡಿದರೆ ಅಭಿವೃದ್ದಿ ಹೆಚ್ಚಿ ಭ್ರಷ್ಟತೆ ಕಡಿಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣ- ಉದಾರೀಕರಣ, ಖಾಸಗೀಕರಣ ಪರಿಣಾಮ ನೌಕರರ ಮೇಲೂ ಆಗಿದೆ. ತಂತ್ರಜ್ಞಾನದ ಉಪಯೋಗ ಅರಿತು ಅದಕ್ಕೆ ಪ್ರಾಧಾನ್ಯ ನೀಡಬೇಕು. ಕೆಲಸವನ್ನು ಪ್ರೀತಿಸಿದರೆ ಭ್ರಷ್ಟತೆ ಕಡಿಮೆಯಾಗುತ್ತದೆ ಎಂದರು.
ರಾಜ್ಯದಲ್ಲಿ 2 ಲಕ್ಷ ಹುದ್ದೆ ಖಾಲಿಯಿದೆ. ಆದಾಗ್ಯೂ ಸುಗಮವಾಗಿ ಆಡಳಿತ ಯಂತ್ರ ಮುನ್ನಡೆಯುತ್ತಿದೆ ಎಂದಾದರೆ ಅದಕ್ಕೆ ದಕ್ಷ ನೌಕರವೃಂದವೇ ಕಾರಣ. ಜನರಿಗಾಗಿ ಉತ್ತಮ ಕೆಲಸ ಮಾಡುವ ಅಧಿಕಾರಿಗಳೊಂದಿಗೆ ಸರ್ಕಾರ ಸದಾ ಇರುತ್ತದೆ. ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದವರು ಸಲಹೆ ನೀಡಿದರು.