ಶ್ರೀನಗರ, ಏ 21 (DaijiworldNews/HR): ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಉಗ್ರ ಸಂಘಟನೆ(ಎಲ್ಇಟಿ ) ಕಮಾಂಡರ್ ಹತ್ಯೆಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲದಲ್ಲಿ ನಡೆದಿದೆ.
ಈ ಕುರಿತು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದು, ಗುರುವಾರ ಬೆಳಗ್ಗೆ ಆರಂಭವಾದ ಎನ್ಕೌಂಟರ್ನಲ್ಲಿ ಎಲ್ಇಟಿ ಉಗ್ರ ಸಂಘಟನೆ ಕಮಾಂಡರ್ ಯೂಸೂಫ್ ಕಾಂಥ್ರೋ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಇನ್ನು ಎಲ್ಇಟಿ ಸಂಘಟನೆಯ ಕಮಾಂಡರ್ ಹಲವು ನಾಗರಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು, ತನ್ನ ಸಹೋದರರನ್ನು ಹತ್ಯೆ ಮಾಡಿದ್ದ ಹಲವು ಭದ್ರತಾ ಪಡೆಗಳ ಸಿಬ್ಬಂದಿಗಳನ್ನು ಕೊಂದಿದ್ದ ಎನ್ನಲಾಗಿದೆ.