ಬೆಂಗಳೂರು, ಏ 21 (DaijiworldNews/HR): ಮಂಗಳೂರು ಮೂಲದ ಮಹಿಳೆಯೊಬ್ಬರು ತನ್ನ ಐದು ವರ್ಷದ ಮಗನನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ಹುಳಿಮಾವು ಪೊಲೀಸ್ ಠಾಣೆ
ಮೃತರನ್ನು ರೋಹಿಣಿ ಶೆಟ್ಟಿ (36) ಮತ್ತು ಅವರ ಮಗ ಸಿಯಾನ್ ಶೆಟ್ಟಿ (5) ಎಂದು ಗುರುತಿಸಲಾಗಿದೆ.
ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರು ಏಪ್ರಿಲ್ 17 ರಂದು ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೋಹಿಣಿ ಅವರ ಪತಿ ಪ್ರವೀಣ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ರೋಹಿಣಿ ಅವರ ತಾಯಿ ಕೂಡ 12 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿಯ ಸಾವಿನಿಂದ ರೋಹಿಣಿ ಖಿನ್ನತೆಗೆ ಒಳಗಾಗಿದ್ದರು. ಮದುವೆಯಾದ ನಂತರ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.
ರೋಹಿಣಿ ತನ್ನ ಮಗನನ್ನು ಕೊಂದು ಬಳಿಕ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ.
ಹುಳಿಮಾವು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.