ಕಾಸರಗೋಡು, ಏ 20 (DaijiworldNews/MS): ಕೇರಳದಲ್ಲಿ ಬಸ್ಸು , ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಪ್ರಯಾಣ ದರದವನ್ನು ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು , ಮೇ ಒಂದರಿಂದ ದರ ಏರಿಕೆ ಜಾರಿಗೆ ಬರಲಿದೆ.
ಬಸ್ಸು ಪ್ರಯಾಣ ದರವನ್ನು ಕನಿಷ್ಠ ಎಂಟು ರೂ . ನಿಂದ ಹತ್ತು ರೂ . ಗೆ ಏರಿಕೆ ಮಾಡಲಾಗಿದೆ. ಆಟೋ ರಿಕ್ಷಾ ಕನಿಷ್ಠ ದರವನ್ನು 25 ರೂ . ನಿಂದ 30 ರೂ .ಗೆ ಏರಿಕೆ ಮಾಡಲಾಗಿದೆ. ಈ ದರ ಒಂದೂವರೆ ಕಿ . ಮೀ ತನಕ ಅನ್ವಯವಾಗಲಿದೆ. ಬಳಿಕದ ಕಿಲೋ ಮೀಟರ್ ಗೆ 15 ರೂ . ನಿಗಧಿ ಮಾಡಲಾಗಿದೆ. ಟ್ಯಾಕ್ಸಿ ದರವನ್ನು ಕನಿಷ್ಠ 200 ರೂ. ಗೆ ಹೆಚ್ಚಿಸಲಾಗಿದ್ದು, ನಂತರದ ಕಿ.ಮೀ ದರವನ್ನು 20 ರೂ . ಗೆ ಹೆಚ್ಚಿಸಲಾಗಿದೆ