ನವದೆಹಲಿ,ಏ 20 (DaijiworldNews/HR): ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳನ್ನು ಹುಡುಕಿಕೊಂಡು ಭಾರತಕ್ಕೆ ಬರುವವರಿಗೆ ಭಾರತವು ಶೀಘ್ರದಲ್ಲೇ ಆಯುಷ್ ವೀಸಾ ವರ್ಗವನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳನ್ನು ಹುಡುಕಿಕೊಂಡು ಭಾರತಕ್ಕೆ ಬರುವವರಿಗೆ ಭಾರತವು ಶೀಘ್ರದಲ್ಲೇ ಆಯುಷ್ ವೀಸಾ ವರ್ಗವನ್ನು ಪ್ರಾರಂಭಿಸಲಾಗುವುದು. ಇದು ದೇಶದ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಅಧಿಕೃತತೆಯನ್ನು ನೀಡುತ್ತದೆ ಎಂದರು.
ಶೀಘ್ರದಲ್ಲೇ ಆಯುಷ್ ಭಾರತವು ಮಾರ್ಕ್ ಅನ್ನು ಪರಿಚಯಿಸಲಿದ್ದುಇದು ದೇಶದ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಅಧಿಕೃತತೆಯನ್ನು ನೀಡುತ್ತದೆ ಎಂದಿದ್ದಾರೆ.
ಇನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಶೀಲಿಸಲಾದ ಉತ್ಪನ್ನಗಳಿಗೆ ಮಾರ್ಕ್ ಅನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.