ಖಾಂಡವಾ, ಏ 20 (DaijiworldNews/HR): ಸಾಧ್ವಿ ರಿತಂಬರ ಅವರು ನಡೆಸುವ ಆಶ್ರಮದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಾಲ್ವರು ಬಾಲಕಿಯರು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾಂಡವಾ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತು ಪೊಲೀಸ್ ಅಧಿಕಾರಿ ಬಲರಾಮ್ ಸಿಂಗ್ ಮಾಹಿತಿ ನೀಡಿದ್ದು ಮೃತಪಟ್ಟ ಬಾಲಕಿಯರು 10-11 ವರ್ಷದವರಾಗಿದ್ದು, .ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಸಂದರ್ಭ ಓರ್ವ ಬಾಲಕಿ ಮುಳುಗಿದ್ದು, ರಕ್ಷಿಸಲು ಪ್ರಯತ್ನಿಸಿದ ಉಳಿದು ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದ್ದಾರೆ.
ಇನ್ನು ಮೃತ ಬಾಲಕಿಯರು ಖರಗೋನ ಜಿಲ್ಲೆಗೆ ಸೇರಿದವರಾಗಿದ್ದು, ಶವಗಳನ್ನು ಕಾಲುವೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.