ನವದೆಹಲಿ, ಏ 20 (DaijiworldNews/MS): ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸುವ ಬಜೆಟ್ ಘೋಷಣೆಯನ್ನು ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳು ಮತ್ತು ಫಿನ್ಟೆಕ್ ಆವಿಷ್ಕಾರಗಳು ದೇಶದಲ್ಲಿ ತ್ವರಿತ ಗತಿಯಲ್ಲಿ ಬೆಳೆದಿವೆ. ಡಿಜಿಟಲ್ ಬ್ಯಾಂಕಿಂಗ್ನ ಪ್ರಯೋಜನಗಳು ದೇಶದ ಮೂಲೆ ಮೂಲೆಯನ್ನು ಗ್ರಾಹಕ ಸ್ನೇಹಿಯಾಗಿ ತಲುಪುವಂತೆ ಖಚಿತಪಡಿಸಿಕೊಳ್ಳಲು ಸರ್ಕಾರವು ನಿರಂತರವಾಗಿ ಈ ವಲಯಗಳನ್ನು ಪ್ರೋತ್ಸಾಹಿಸುತ್ತಿದೆ. ಈ ಕಾರ್ಯಸೂಚಿಯನ್ನು ಮುಂದಕ್ಕೆ ತೆಗೆದುಕೊಂಡು, ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು, ದೇಶದ 75 ಜಿಲ್ಲೆಗಳಲ್ಲಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಿಂದ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ಗಳನ್ನು ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಕೊರೊನಾ ಸಾಂಕ್ರಾಮಿಕ ರೋಗ ದೇಶದಾದ್ಯಂತ ಹರಡುವ ಮೊದಲು ಭಾರತವು ಡಿಜಿಟಲೀಕರಣವನ್ನು ವೇಗವಾಗಿ ಹೆಚ್ಚಿಸಿತ್ತು. ಇದು ಪ್ರಪಂಚದಲ್ಲಿಯೇ ಹಿಂದೆಂದೂ ಎಲ್ಲಿಯೂ ಕಂಡುಬಂದಿಲ್ಲ ಎಂದು ವಿವರಿಸಿದ್ದಾರೆ
ಭಾರತದ 3 ದೊಡ್ಡ ಸಾರ್ವಜನಿಕ ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ಆಧಾರ್, ಯುಪಿಐ ಮತ್ತು ಕೋವಿನ್ ಪ್ರಪಂಚದ ಮುಂದೆ ಹುಟುಹಾಕಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಮನ್ನಣೆ ದೊರೆಯಿತು. ಗಮನಾರ್ಹವಾಗಿ ಆಧಾರ್ ಅತಿದೊಡ್ಡ ಅನನ್ಯ ಡಿಜಿಟಲ್ ಗುರುತಾಗಿದ್ದರೆ, UPI ಅತಿದೊಡ್ಡ ಡಿಜಿಟಲ್ ಪಾವತಿ ಅಪ್ಲಿಕೇಶನ್ ಆಗಿದೆ. ಕೋವಿನ್ ಮೂಲಕ ದೇಶದಲ್ಲಿ 150 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಡಿಜಿಟಲ್ ಕಾರ್ಯಕ್ರಮವು ಪ್ರತಿಯೊಂದು ವಿಭಾಗದ ಜನರ ಜೀವನವನ್ನು ಹೆಚ್ಚು ಸರಳಗೊಳಿಸಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 'ಡಿಜಿಟಲ್ ಮಾತ್ರವಲ್ಲದೆ , ಬ್ಯಾಂಕಿಂಗ್ ಜೊತೆಗೆ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ (NBFC) ಸ್ಥಾಪಿಸುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದ್ದಾರೆ.