ಬಳ್ಳಾರಿ, ಏ 20 (DaijiworldNews/DB): ಬಳ್ಳಾರಿ ಜಿಲ್ಲೆಯ ಕೆ ವೀರಾಪುರ ಗ್ರಾಮದಲ್ಲಿ ಬಾಲಕನೋರ್ವ ಕೊಳಚೆ ನೀರಲ್ಲಿ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ವೀರಾಪುರ ಗ್ರಾಮದ ಬಸವರಾಜ್ ಹಾಗೂ ಜ್ಯೋತಿ ದಂಪತಿ ಪುತ್ರ ಸೋಮೇಶ್ (4) ಮೃತಪಟ್ಟ ಮಗು.
ಮಗು ಬುಧವಾರ ಬೆಳಗ್ಗೆ ಮನೆಯ ಮುಂಭಾಗದಲ್ಲಿ ಆಟ ಆಡುತ್ತಾ ಇದ್ದಾಗ ಸೀದಾ ಕೊಳಚೆ ನೀರು ಬಳಿ ಹೋಗಿದ್ದು, ನೀರಿಗೆ ಬಿದ್ದಿದೆ. ಆದರೆ ಇದನ್ನು ಪೋಷಕರು ಗಮನಿಸಿರಲಿಲ್ಲ. ಬಳಿಕ ಆಟವಾಡುತ್ತಿದ್ದ ಮಗು ಕಾಣದ ಹಿನ್ನೆಲೆಯಲ್ಲಿ ತಾಯಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಕೊಳಚೆ ನೀರಿನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಪುಟ್ಟ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.