ತುಮಕೂರು, ಏ 20 (DaijiworldNews/HR): ನಮ್ಮೂರಿಗೆ ಹೋಗೋದಕ್ಕೆ ರಸ್ತೆ ಸರಿಯಿಲ್ಲ. ನೀರಿನ ಸೌಕರ್ಯ ಸರಿಯಾಗಿಲ್ಲ ಸರಿ ಮಾಡಿಸಿಕೊಂಡಿ ಅಂದಿದ್ದಕ್ಕೆ ಯುವಕನೊಬ್ಬನಿಗೆ ಕಾಂಗ್ರೆಸ್ ಶಾಸಕರೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಪಾಗಡದಲ್ಲಿ ನಡೆದಿದೆ.
ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಪಾವಗಡ ತಾಲೂಕಿನ ತಾಲೂಕು ಆಡಳಿತ ಕಛೇರಿಯಲ್ಲಿ ನಡೆದಂತ ಸಭೆಯೊಂದರಲ್ಲಿ ಭಾಗವಹಿಸಿದ್ದು, ಈ ವೇಳೆ ನಾಗೇನಹಳ್ಳಿಯ ಯುವಕ ನರಸಿಂಹಮೂರ್ತಿ ಎಂಬುವರು ತಮ್ಮ ಗ್ರಾಮದ ಸಮಸ್ಯೆಯನ್ನು ಶಾಸಕರ ಬಳಿಯಲ್ಲಿ ಹೇಳಿಕೊಂಡು, ಪರಿಹಾರಕ್ಕೆ ಮನವಿ ಮಾಡೋದಕ್ಕಾಗಿ ಹೋಗಿದ್ದಾರೆ.
ಇನ್ನು ಈ ವೇಳೆ ಶಾಸಕರು ಆಯ್ತು ಮಾಡಿಸಿಕೊಡುವೆ ಎಂದಾಗ, ಅಲ್ಲ ನೀವು ಯಾವಾಗ್ಲೂ ಕೇಳಿದಾಗ ಇದೇ ಹೇಳ್ತೀರಿ. ರಿಪೇರಿ ಮಾತ್ರ ಆಗಿಲ್ಲ ಎಂದು ಎಲ್ಲರೆದುರು ಬಹಿರಂಗವಾಗಿಯೇ ಕೇಳಿದಾಗ ಸಿಟ್ಟಾದಂತ ಶಾಸಕರು ಕಪಾಳ ಮೋಕ್ಷ ಮಾಡಿರೋದಾಗಿ ತಿಳಿದು ಬಂದಿದೆ.
ವೆಂಕಟರಮಣಪ್ಪ ಹೇ ಅಲ್ಲಿ ಪೊಲೀಸರನ್ನು ಕರೆಸ್ರೋ ಇವನನ್ನು ಒದ್ದು ಒಳಗೆ ಹಾಕಲಿ ಎಂದು ಹೇಳಿರುವ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.