ಶಿವಮೊಗ್ಗ, ಏ 20 (DaijiworldNews/DB): ಮುಂದಿನ ದಿನಗಳಲ್ಲಿ 50 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳಿಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಒಟ್ಟು ಪ್ರಕ್ರಿಯೆಗಳ ಮೇಲೆ ನಿಗಾ ಇಡುವ ಸಲುವಾಗಿ ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆಯಡಿ ಉನ್ನತ ಮಟ್ಟದ ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆ ವ್ಯವಹಾರಕ್ಕೆ ಶೇ. 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪದ ನಡುವೆಯೇ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ.
ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದವರು ಯಾರೂ ಕೂಡಾ ಸಂಬಂಧಿಸಿದ ದಾಖಲೆ ಈವರೆಗೆ ನೀಡಿಲ್ಲ. ದಾಖಲೆ ನೀಡದರೆ ತನಿಖೆ ನಡೆಸಬಹುದು. ಆದಾಗ್ಯೂ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿನ ಕಮಿಷನ್ ವ್ಯವಹಾರಕ್ಕೆ ನಿಯಂತ್ರಣ ಹಾಕಿ ಪಾರದರ್ಶಕ ಸೇವೆ ನೀಡಬೇಕೆಂಬ ಉದ್ದೇಶದಿಂದ ಕೆಟಿಪಿಪಿ ಕಾಯ್ದೆಯಡಿ ಸಮಿತಿ ರಚನೆ ಮಾಡಲಾಗುವುದು. ಓರ್ವ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಸಮಿತಿ ಕಾರ್ಯಾಚರಿಸಲಿದೆ. 50 ಕೋಟಿ. ರೂ ಮೇಲ್ಪಟ್ಟ ಕಾಮಗಾರಿಗಳಿಗೆ ಅನುಮೋದನೆ ನೀಡುವ ಮುನ್ನ ಈ ಸಮಿತಿ ಅದನ್ನು ಪರಿಶೀಲಿಸಲಿದೆ ಎಂದರು.
ಮುಂದಿನ ದಿನಗಳಲ್ಲಿ ಯಾವುದೇ ಸ್ಥಳೀಯಾಡಳಿತಗಳ ಮಟ್ಟದಲ್ಲಿ ಕಾಮಗಾರಿ ನಡೆಸಲು ವರ್ಕ್ ಆರ್ಡರ್ ಕಡ್ಡಾಯ. ಮೌಖಿಕ ಆದೇಶದ ಮೂಲಕ ಕಾಮಗಾರಿಗೆ ಅವಕಾಶ ನೀಡಿದರೆ ಅಂತಹ ಕಾಮಗಾರಿಗಳಿಗೆ ಅಧಿಕಾರಿಗಳೇ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ.