ಬೆಂಗಳೂರು, ಏ 20 (DaijiworldNews/HR): ಆರ್ ಅಶೋಕ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ, ಏನೆ ಆದರೂ ಕಾಂಗ್ರೆಸ್ ಕಾರಣ ಅನ್ನುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಘಟನೆಗೆ ಕಾಂಗ್ರೆಸ್ ನಾಯಕರು ಭಾಗಿ ಎಂಬ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ತಾಫ್ ಅವರಿಗೆ ಘಟನೆಯಲ್ಲಿ ಗಾಯ ಆಗಿದೆ. ಬೆನ್ನಿಗೆ ಹೊಡೆದಿದ್ದಾರೆ. ಅವರು ಸಹ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಈಗ ಈಚೆ ಬಂದಿದ್ದಾರೆ. ಕಾಂಗ್ರೆಸ್ನವರು ಗಲಭೆಯಲ್ಲಿ ಭಾಗಿಯಾಗಿದ್ದರೆ ಅರೆಸ್ಟ್ ಮಾಡಲಿ ಎಂದರು.
ಇನ್ನು ನೈತಿಕ ಪೊಲೀಸ್ ಗಿರಿಯನ್ನು ಪ್ರಾರಂಭದಲ್ಲಿಯೇ ಮೊಟಕು ಮಾಡಿದ್ದರೆ, ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಯಡಿಯೂರಪ್ಪ ಮಾತನಾಡುತ್ತಾರೆ, ಆಶೋಕ್ ಮಾತನಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇವರು ಯಾವಾಗ ಕಾನೂನು ಪಾಲನೆ ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.