ಬೆಂಗಳೂರು, ಏ 20 (DaijiworldNews/HR): ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ನಡೆಸಿದ ಪೂರ್ವ ನಿಯೋಜಿತ ಸಂಚು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಕರ್ನಾಟಕದ ಮೀರ್ಸಾಕ್ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಈಗ ಒಂದರ ಮೇಲೊಂದರಂತೆನಡೆಯುತ್ತಿರುವ ಕೋಮು ಪ್ರಚೋದನೆ ಚಟುವಟಿಕೆಗಳ ಹಿಂದಿರುವುದು ನಿಮ್ಮ ಕುಚೇಷ್ಟೆಯೋ ಅಥವಾ ಕೆಪಿಸಿಸಿಯ ಭ್ರಷ್ಟ ಅಧ್ಯಕ್ಷನ ಕೈವಾಡವೋ ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಳೇ ಹುಬ್ಬಳ್ಳಿಯಲ್ಲಿ ನಡೆದ ಕೋಮುಗಲಭೆಗೆ ಕಾಂಗ್ರೆಸ್ ಪಕ್ಷವೇ ರೂವಾರಿ. ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತನ್ನ ಕಾರಿನಲ್ಲಿ ಕೋಮು ಪ್ರಚೋದನೆಗೆ ಕಾರಣನಾದ ಮೌಲ್ವಿಯನ್ನು ಜೋಪಾನವಾಗಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿದೆ.
ಇನ್ನು ಸಮಾಜದಲ್ಲಿ ಶಾಂತಿ, ಸುಭಿಕ್ಷ ನೆಲೆಸುವುದು ಕಾಂಗ್ರೆಸ್ ನಾಯಕರಿಗೆ ಬೇಕಿಲ್ಲವೇ? ಹಿಜಾಬ್ ವಿವಾದ ಮತ್ತು ಹುಬ್ಬಳ್ಳಿ ಕೋಮುಗಲಭೆಗೆ ಸ್ವಾಮ್ಯತೆ ಇದೆ. ಎರಡೂ ಕೂಡ ಕಾಂಗ್ರೆಸ್ ಪ್ರೇರಿತ ಮತ ಕ್ರೌಢೀಕರಣದ ತಂತ್ರ. ಹಿಜಾಬ್ ಪ್ರಕರಣದಲ್ಲಿ ತನ್ನ ಕಾನೂನು ಘಟಕದ ಅಧ್ಯಕ್ಷರನ್ನೇ ವಾದ ಮಾಡಲು ನಿಯೋಜಿಸಿತು. ಹುಬ್ಬಳ್ಳಿ ಗಲಭೆಯ ಮತಾಂಧ ಆರೋಪಿಗಳ ಪರವಾಗಿ ಕೆಪಿಸಿಸಿಯಿಂದಲೇ ವಕೀಲರನ್ನು ನಿಯೋಜಿಸಿದ್ದೀರಾ ಎಂದು ಪ್ರಶ್ನಿಸಿದೆ.