ಶಿವಮೊಗ್ಗ, ಏ 20 (DaijiworldNews/HR): ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಮುಸಲ್ಮಾನರ ತೃಪ್ತಿಪಡಿಸೋದು, ಕಮಿಷನ್ ಬಗ್ಗೆ ಮಾತನಾಡೋದು ಬಿಟ್ರೆ ಬೇರೆ ಉದ್ಯೋಗವೇ ಇಲ್ಲ. ಸೋತರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಶಾಂತಿಯಲ್ಲಿದ್ದ ರಾಜ್ಯವನ್ನು ಕೊಲೆ- ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡಿಯುತ್ತಿದ್ದು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡ್ತಾನೆ. ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದಿಸುವ ಹೇಳಿಕೆ ಕೊಡ್ತಾನೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಅವರು ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯೋದು ನೋಡ್ತಿದ್ದಾರೆ. ಅಲ್ಲಾ ಹು ಅಕ್ಬರ್ ಜೊತೆಗೆ ಆರ್ಎಸ್ಎಸ್ ಮುರ್ದಾಬಾದ್ ಘೋಷಣೆಗಳನ್ನೂ ಕೂಗಿದ್ದಾರೆ. ಪುಂಡರಿಗೆ ಶಿಕ್ಷೆಯಾಗಬೇಕು ಎಂದರು.
ಇನ್ನು ಕೆಜಿ ಹಳ್ಳಿ, ಡಿಜಿ ಹಳ್ಳಿ, ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ ಆಯ್ತು ಇನ್ನೆಲ್ಲಿ ಗಲಭೆ ಮಾಡ್ತಾರೋ ಗೊತ್ತಾಗಲ್ಲ, ಗಮನ ಹರಿಸಬೇಕು. ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ, ಈಗಾಗಲೇ ಬಂದನ ಮಾಡಲಾಗುತ್ತಿದೆ. ಗುಂಡಾ ಕಾಯ್ದೆ ಅಡಿ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದಿದ್ದಾರೆ.
ದಿಂಗಾಲೇಶ್ವರ ಶ್ರೀಗಳು ನನ್ನನ್ನು ನಿರಪರಾಧಿ, ಆರೋಪದಿಂದ ಮುಕ್ತರಾಗಿ ಹೊರಗೆ ಬರ್ತಾರೆ ಎಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.