ಭೋಪಾಲ್, ಏ 20 (DaijiworldNews/DB): ತಂದೆ ತನ್ನ ಮೊಬೈಲ್ ಫೋನ್ ಡೇಟಾ ಪ್ಯಾಕ್ ರೀಚಾರ್ಜ್ ಮಾಡಲು ನಿರಾಕರಿಸಿದ್ದನ್ನೇ ನೆಪವಾಗಿಟ್ಟುಕೊಂಡು 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಕೂಲಿ ಕಾರ್ಮಿಕನಾಗಿರುವ ತಂದೆ ಆಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಮಗ ಮೊಬೈಲ್ಗೆ ಡೇಟಾ ಪ್ಯಾಕ್ ಹಾಕುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಮಗನ ಬೇಡಿಕೆಯನ್ನು ತಂದೆ ನಿರಾಕರಿಸಿದ್ದರಿಂದ ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸೋಮವಾರ ನಡೆದಿದ್ದು, ಮಂಗಳವಾರ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಬಾಲಕ ಮೊಬೈಲ್ ಫೋನ್ನಲ್ಲಿ ಆನ್ಲೈನ್ ಗೇಮ್ ವ್ಯಸನಿಯಾಗಿರುವುದು ಕಂಡುಬಂದಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಅಲೋಕ್ ಶರ್ಮಾ ತಿಳಿಸಿದ್ದಾರೆ.