ಬೆಂಗಳೂರು, ಏ 20 (DaijiworldNews/HR): ಕರ್ನಾಟಕದ ಶಾಲೆಗಳಲ್ಲಿ 1 ಮತ್ತು 2 ನೇ ತರಗತಿಗೆ 2022-23 ನೇ ಸಾಲಿನಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಪೂರ್ವ ಪ್ರಾಥಮಿಕ ಅಥವಾ ಅಂಗನವಾಡಿ ಹಂತದಿಂದಲೇ ಜಾರಿಯಾಗಬೇಕು. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ವಹಿಸಲಿದೆ ಎಂದರು.
ಇನ್ನು ಶಿಕ್ಷಣ ಇಲಾಖೆಯಿಂದ 1 ಮತ್ತು 2 ನೇ ತರಗತಿಗೆ ಈ ವರ್ಷ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಾಲಾ ಶಿಕ್ಷಣದಲ್ಲಿ ಹೇಗೆ ಜಾರಿಗೊಳಿಸಬೇಕು, ಪಠ್ಯ ಪುಸ್ತಕ ರಚನೆ ಎಲ್ಲವನ್ನೂ ಕುರಿತು ಕರಡುನಿಯಮಾವಳಿ ರೂಪಿಸಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.