ಲಕ್ನೋ, ಏ 19 (DaijiworldNews/HR): ಮದುವೆ ಮಂಟಪದಲ್ಲೇ ವಧುವಿಗೆ ಹಾರ ಹಾಕಲು ಮುಂದಾದ ವರನಿಗೆ ವಧು ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರ್ನಲ್ಲಿ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆಯಲ್ಲಿ ವರ-ವಧು ಅಲಂಕಾರಗೊಂಡು ವೇದಿಕೆ ಮೇಲಿದ್ದು, ಇನ್ನೇನು ಹಾರಹಾಕಲು ಮುಂದಾದ ವರನಿಗೆ ಎರಡು ಮೂರು ಬಾರಿ ವಧು ಕಪಾಳಮೋಕ್ಷ ಮಾಡಿದ್ದಾಳೆ.
ಇನ್ನು ಕಪಾಳಮೋಕ್ಷ ಮಾಡಿ ಬಳಿಕ ಅಲಂಕಾರದಲ್ಲಿದ್ದ ವಧು ವೇದಿಕೆಯಿಂದ ಹೊರನಡೆದು ವರ ಹಾಗೂ ನೆರೆದಿದ್ದ ಅತಿಥಿಗಳನ್ನು ದಿಗ್ಭ್ರಮೆಗೊಳಿಸಿದ್ದಾಳೆ.