ಚಾಮರಾಜನಗರ, ಏ 19 (DaijiworldNews/HR): ರಾಜ್ಯದಲ್ಲಿ ದಿನಕ್ಕೊಂದು ಗಲಭೆ, ಪ್ರಕರಣಗಳನ್ನು ಬಿಜೆಪಿ ಹುಟ್ಟು ಹಾಕುತ್ತಿದ್ದು, ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬೆಲೆ ಏರಿಕೆಯನ್ನು, ರಾಜ್ಯದ ಜಲ್ವಂತ ಸಮಸ್ಯೆಗಳನ್ನು ಮುಚ್ಚಿಹಾಕೋದಕ್ಕಾಗಿ ರಾಜ್ಯದಲ್ಲಿ ದಿನಕ್ಕೊಂದು ಗಲಭೆ, ಪ್ರಕರಣಗಳನ್ನು ಬಿಜೆಪಿ ಹುಟ್ಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರೇ ನೇರ ಕಾರಣ. ಈಶ್ವರಪ್ಪ ಮನುಷ್ಯನೇ ಅಲ್ಲ, ಅವನೊಬ್ಬ ಕೊಲೆಗಡುಕ. ಅವರನ್ನು ಭ್ರಷ್ಟಾಚಾರ ಕಾಯ್ದೆಯಡಿ ಬಂಧಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.