ಸಾಗರ, ಏ 19 (DaijiworldNews/DB): ಸಚಿವ ಸ್ಥಾನಕ್ಕೆ ನಾನು ಯಾವುದೇ ಬೇಡಿಕೆ ಮುಂದಿಟ್ಟಿಲ್ಲ. ಪಕ್ಷ ಸಚಿವನನ್ನಾಗಿ ಮಾಡಿದರೆ ಖಂಡಿತಾ ನಿಭಾಯಿಸುತ್ತೇನೆ ಎಂದು ಶಾಸಕ ಎಚ್. ಹರತಾಳು ಹಾಲಪ್ಪ ಹೇಳಿದ್ದಾರೆ.
ಸಾಗರದಲ್ಲಿ ತಹಶೀಲ್ದಾರ್ ಕಚೇರಿ ಸಮುಚ್ಛಯವನ್ನು ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನದಕ್ಕೆ ಬದ್ಧ ಎಂದರು.
ಆರಗ ಜ್ಞಾನೇಂದ್ರ ಮತ್ತು ಈಶ್ವರಪ್ಪ ಅತ್ಯುತ್ತಮ ಸಚಿವರು. ಆದರೆ ರಾಜಕೀಯ ಷಡ್ಯಂತ್ರದಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಗಿ ಬಂತು. ಈಗಾಗಲೇ ಈಡಿಗ ಕೋಟಾದಿಂದ ಇಬ್ಬರು ಸಚಿವರಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕೇ ಬೇಡವೇ ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.