ಪಾಲಕ್ಕಾಡ್, ಏ 19 (DaijiworldNews/HR): ಏಪ್ರಿಲ್ 15 ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಪಿಎಫ್ಐ ನಾಯಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ರಮೇಶ್, ಆರುಮುಗನ್ ಮತ್ತು ಸರವಣನ್ ಎಂದು ಗುರುತಿಸಲಾಗಿದೆ.
ಈ ಕುರಿತು ಎಡಿಜಿಪಿ ವಿಜಯ್ ಸಖರೆ ಮಾಹಿತಿ ನೀಡಿದ್ದು, ಮೂವರನ್ನು ಬಂಧಿಸಲಾಗಿದ್ದು, ಅವರು 2021 ರಲ್ಲಿ ಆರ್ಎಸ್ಎಸ್ ನಾಯಕ ಸಂಜಿತ್ ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನಾಯಕ ಸುಬೈರ್ (43) ಅವರನ್ನು ಹತ್ಯೆ ಮಾಡಿದ್ದಾರೆ ಎಂದರು.
ಇನ್ನು ಸಂಜಿತ್ ಅವರ ಹತ್ಯೆಯ ನಂತರ, ರಮೇಶ್ ಪಿಎಫ್ಐ ನಾಯಕನ ಕೊಲೆಗೆ ಯೋಜಿಸಲು ಪ್ರಾರಂಭಿಸಿದರು ಮತ್ತು ಈ ಮೂವರು ಅವನನ್ನು ಒಂದೆರಡು ಬಾರಿ ಕೊಲ್ಲಲು ಪ್ರಯತ್ನಿಸಿದ್ದು, ಏಪ್ರಿಲ್ 15 ರಂದು ಕೊಲೆ ಮಾಡಿದ್ದಾರೆ.
ಇತ್ತೀಚೆ ಹತ್ಯೆಯಾದ ಆರ್ಎಸ್ಎಸ್ ನಾಯಕ ಎಸ್.ಕೆ.ಶ್ರೀನಿವಾಸನ್ (45) ಅವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.