ಹಾಸನ, ಏ 19 (DaijiworldNews/HR): ರಾಜ್ಯದಲ್ಲಿ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸೋದು ಸೂಕ್ತ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಸತ್ತುಹೋಗಿದ್ದು, ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸೋದು ಸೂಕ್ತ ಎಂದರು.
ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಸೋಲಿಗೆ ಅವರದೇ ಪಕ್ಷದವರು ಕಾರಣರಾದರು ಕಾಂಗ್ರೆಸ್ಗೆ ಗೌರವ ಉಳಿದಿದ್ದರೆ ಓರ್ವ ದಲಿತ ಮುಖಂಡ 7 ಬಾರಿ ಲೋಕಸಭೆಗೆ ಗೆದ್ದ ಮುನಿಯಪ್ಪ ಅವರನ್ನು ಹೇಗೆ ನೆಡೆಸಿಕೊಂಡಿದ್ದಾರೆ ಮತ್ತು ಅವರ ಸೋಲಿಗೆ ಕಾರಣ ಯಾರು ಎಂದು ಜನರಿಗೆ ಗೊತ್ತಿದೆ ಎಂದಿದ್ದಾರೆ.
ಇನ್ನು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡೋ ಯಾವುದೇ ನೈತಿಕತೆ ಇಲ್ಲ. ಹಾಸನ ವಿಮಾನ ನಿಲ್ದಾಣ, ಪಾರ್ಕ್ ಸೇರಿದಂತೆ ನಾನಾ ಯೋಜನೆ ಜಾರಿಯಾಗದೆ ಇರಲು ಸರ್ಕಾರದೊಂದಿಗೆ ಹೊಂದಾಣಿಕೆಯಾಗದಿರುವುದು ಕಾರಣವಾಗಿದೆ ಎಂದು ಹೇಳಿದ್ದಾರೆ.