ಲಖನೌ, ಏ 19 (DaijiworldNews/HR): ಉತ್ತರ ಪ್ರದೇಶದ ಎಲ್ಲ ಪೊಲೀಸರು ಮತ್ತು ಆಡಳಿತಾಧಿಕಾರಿಗಳ ರಜೆಗಳನ್ನು ಮೇ 4ರವರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರದ್ದುಪಡಿಸಿದ್ದಾರೆ.
ಪ್ರಸ್ತುತ ರಜೆಯಲ್ಲಿರುವವರು ಮುಂದಿನ 24 ಗಂಟೆಗಳೊಳಗೆ ತಮ್ಮ ಕರ್ತವ್ಯಗಳಿಗೆ ಹಿಂದಿರುಗಬೇಕು ಹಾಗೂ ಎಲ್ಲ ಆಡಳಿತಾಧಿಕಾರಿಗಳು, ಪೊಲೀಸರು, ಕಮಿಷನರ್ಗಳ ರಜೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮೇ 4ವರೆಗೂ ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯು ಸೋಮವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಮುಂಬರುವ ದಿನಗಳಲ್ಲಿ ಅನೇಕ ಹಬ್ಬಗಳು ಇರುವ ಕಾರಣ ಮುಖ್ಯಮಂತ್ರಿ ಆದಿತ್ಯನಾಥ್ ಈ ಆದೇಶ ಹೊರಡಿಸಿರುವುದಾಗಿ ವರದಿಯಾಗಿದ್ದು,
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ, ಗಸ್ತು ತಿರುಗುವುದು ಹಾಗೂ ಪರಿಸ್ಥಿತಿಯ ಮೇಲೆ ನಿಗಾವಹಿಸಲು ಡ್ರೋನ್ ಬಳಕೆಯ ಕುರಿತು ಆದೇಶದಲ್ಲಿ ಸೂಚಿಸಲಾಗಿದೆ.