ನವದೆಹಲಿ ,ಏ 18 (DaijiworldNews/MS): ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಯುಪಿಎಸ್ಸಿ ಈಗ ‘ಯೂನಿಯನ್ ಪ್ರಚಾರಕ್ ಸಂಘ ಕಮಿಷನ್’ ಆಗುತ್ತಿದೆ " ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿರುವ ಮನೋಜ್ ಸೋನಿ ಅವರು ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ ಎಂದು ಹೇಳುವ ಮಾಧ್ಯಮ ವರದಿಯ ಸ್ಕ್ರೀನ್ಶಾಟ್ ಅನ್ನು ಟ್ವಿಟ್ಟರ್ನಲ್ಲಿ ಗಾಂಧಿ ಹಂಚಿಕೊಂಡು ಈ ಟೀಕೆ ಮಾಡಿದ್ದಾರೆ.
ದೇಶದ ಒಂದೊಂದೇ ಸಂಸ್ಥೆಯನ್ನು ‘ನಾಶ’ಪಡಿಸುವ ಮೂಲಕ, ದೇಶದ ಸಂವಿಧಾನವನ್ನು ಹಂತಹಂತವಾಗಿ ನಾಶಪಡಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಈ ಕುರಿತ ಟ್ವೀಟ್ ಜೊತೆಗೆ, ಸೋನಿ ನೇಮಕಕ್ಕೆ ಸಂಬಂಧಿಸಿದ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.