ಫರಿದಾಬಾದ್, ಏ 18 (DaijiworldNews/MS): ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಉತ್ತರ ಪ್ರದೇಶದ ನಿವಾಸಿ ದೇಶರಾಜ್ ಎಂದು ಗುರುತಿಸಲಾಗಿದೆ. ಸದ್ಯ ಮಗು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಯನ್ನು ಉತ್ತರ ಪ್ರದೇಶದ ನಿವಾಸಿ ದೇಶರಾಜ್ ಎಂದು ಗುರುತಿಸಲಾಗಿದೆ. ಬಲ್ಲಬ್ಗಢ್ನಲ್ಲಿರುವ ಶಾಹಪುರ್ ಗ್ರಾಮದಲ್ಲಿ ಬಾಲಕಿಯ ಪಕ್ಕದ ಮನೆಯಲ್ಲಿಯೇ ಆರೋಪಿ ವಾಸಿಸುತ್ತಿದ್ದ. ಬಾಲಕಿಯ ತಾಯಿ ಇತರರ ಮನೆಗೆ ಮನೆಕೆಲಸಕ್ಕೆ ತೆರಳುತ್ತಿದ್ದರು. ತಂದೆ ಕಾರ್ಖಾನೆಯೊಂದರಲ್ಲಿ ಕೆಲಸಗಾರನಾಗಿದ್ದರು.
ಸಂತ್ರಸ್ತೆಯ ತಾಯಿ ಪ್ರಕಾರ, ಕೆಲಸದಿಂದ ತಾಯಿ ಮನೆಗೆ ಹಿಂದಿರುಗಿದಾಗ ಆರೋಪಿಯು ಬಾಲಕಿಗೆ ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಕೂಡಲೇ ಸಹಾಯಕ್ಕಾಗಿ ನೆರೆಹೊರೆಯವರನ್ನು ಕೂಗಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
"ನಾವು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ ಮತ್ತು ಸೋಮವಾರ ಅವರನ್ನು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು" ಎಂದು ಪೊಲೀಸ್ ವಕ್ತಾರ ಸುಬೆ ಸಿಂಗ್ ಹೇಳಿದ್ದಾರೆ.