ನವದೆಹಲಿ, ಏ 17 (DaijiworldNews/DB): ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಏಪ್ರಿಲ್ 21 ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದು, ಇದು ಅವರ ಮೊದಲ ಭಾರತ ಭೇಟಿಯಾಗಿದೆ.
ಲಂಡನ್ನಿಂದ ನೇರವಾಗಿ ಗುಜರಾತ್ನ ಅಹಮದಾಬಾದ್ಗೆ ವರು ಆಗಮಿಸಲಿದ್ದಾರೆ. ಬ್ರಿಟನ್ ಮತ್ತು ಭಾರತದ ಪ್ರಮುಖ ಕೈಗಾರಿಕೆಗಳಲ್ಲಿ ಹೂಡಿಕೆ, ಒಡಂಬಡಿಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳಿಗೆ ಸಂಬಂಧಿಸಿ ಸಭೆ ನಡೆಯಲಿದೆ. ಏಪ್ರಿಲ್ 22ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಈ ವೇಲೆ ನಡೆಯಲಿದೆ.
ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ಜಾನ್ಸನ್ ಭಾರತ ಭೇಟಿಯ ಮುಖ್ಯ ಉದ್ದೇಶವಾಗಿದೆ. ರಕ್ಷಣೆ, ರಾಜತಾಂತ್ರಿಕ ವಿಚಾರ ಮತ್ತು ಪಾಲುದಾರಿಕೆ ಕುರಿತಂತೆಯೂ ಈ ವೇಳೆ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.