ಚಂಡೀಗಢ, ಏ 17 (DaijiworldNews/DB): ಪಂಜಾಬ್ ರಾಜ್ಯ ಸಭಾ ಸದಸ್ಯ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಸಂಬಳವನ್ನು ರೈತರ ಮಕ್ಕಳಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದಿಂದ ರಾಜ್ಯ ಸಭಾ ಸದಸ್ಯರಾಗಿ ಅವರು ಆಯ್ಕೆಯಾಗಿದ್ದರು. ತಮ್ಮ ಸಂಬಳವನ್ನು ರೈತರ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅಭಿವೃದ್ದಿಗಾಗಿ ನೀಡುತ್ತೇನೆ. ರಾಜ್ಯಸಭಾ ಸಂಸದನಾಗಿ ಪಡೆಯುವ ಸಂಬಳ ಅವರಿಗೇ ಮೀಸಲು ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಸಂಸದನಾಗಿ ದೇಶದ ಜವಾಬ್ದಾರಿ ನನ್ನ ಮೇಲಿದೆ. ದೇಶದ ಜವಾಬ್ದಾರಿಯಲ್ಲಿ ರೈತರು ಮುಖ್ಯವಾಹಿನಿಯಲ್ಲಿದ್ದಾರೆ. ನನ್ನಿಂದಾಗುವ ಸಹಕಾರ ಮಾಡುತ್ತೇನೆ ಎಂದಿದ್ದಾರೆ.