ನವದೆಹಲಿ, ಏ 16 (DaijiworldNews/DB): ದೇಶವನ್ನು ದ್ವೇಷ, ಧರ್ಮ ವೈಷಮ್ಯಗಳೇ ಆವರಿಸಿರುವುದು ಕಳವಳಕಾರಿಯಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಲೇಖನ ಬರೆದಿರುವ ಅವರು, ದೇಶವನ್ನಾವರಿಸುವ ಇಂತಹ ವಿಷವರ್ತುಲಗಳನ್ನು ಈಗಲೇ ಕಿತ್ತೊಗೆಯದಿದ್ದಲ್ಲಿ ಮುಂದಿ ಎಂದಿಗೂ ಸರಿಪಡಿಸಲಾಗದಷ್ಷು ಪರಿಸ್ಥಿತಿ ಹದಗೆಡುತ್ತದೆ ಎಂದಿದ್ದಾರೆ.
ದ್ವೇಷ, ಅಸೂಯೆ, ಧರ್ಮಾಂಧತೆ, ವೈಷಮ್ಯ ಪ್ರವೃತ್ತಿಗಳು ದೇಶದ ಅಭ್ಯುದಯಕ್ಕೆ ವಿಷಕಾರಕವಾಗಿವೆ. ಇವುಗಳನ್ನು ಬೆಳೆಯಲು ಬಿಡಬಾರದು. ಹಿಂದಿನವರು ಕಟ್ಟಿದ ಕಷ್ಟದ ಕೋಟೆಯನ್ನು ಇಂತಹವುಗಳು ನಾಶಪಡಿಸುತ್ತವೆ ಎಂದವರು ಬರೆದಿದ್ದಾರೆ.