ಅಹಮದಾಬಾದ್, ಏ 16 (DaijiworldNews/HR): ನಾವೀಗ ಸ್ವಾವಲಂಬಿಯಾಗಬೇಕಾದ ಕಾಲ ಸಮೀಪಿಸಿದೆ. ದೇಶದ ಜನರು ಕೇವಲ ಸ್ಥಳೀಯವಾಗಿ ಉತ್ಪಾದಿಸಿದ ವಸ್ತುಗಳನ್ನ ಖರೀದಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಒಂದು ವೇಳೆ ಜನರು ಮುಂದಿನ 25 ವರ್ಷಗಳ ಕಾಲ ಸ್ಥಳೀಯ ವಸ್ತುಗಳನ್ನು ಬಳಕೆ ಮಾಡಿದಲ್ಲಿ, ನಂತರ ಭಾರತ ನಿರುದ್ಯೋಗ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ ಎಂದರು.
ಇನ್ನು ನಾವು ಎಚ್ಚರದಲ್ಲಿರಲಿ ಅಥವಾ ನಿದ್ರಿಸುತ್ತಿರಲಿ. ನಾವು ಈ ಹಿಂದಿನಂತೆ ಮುಂದುವರಿಯಲು ಸಾಧ್ಯವಿಲ್ಲ. ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಇಡೀ ಪ್ರಪಂಚವೇ ನಾವು ಆತ್ಮನಿರ್ಭರರಾಗುವುದು (ಸ್ವಾವಲಂಬಿ) ಹೇಗೆ ಎಂಬ ಬಗ್ಗೆ ಆಲೋಚಿಸುತ್ತಿದೆ ಎಂದಿದ್ದಾರೆ.