ಕೇರಳ, ಏ 16 (DaijiworldNews/HR): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕಾರ್ಯಕರ್ತನನ್ನು ಪಾಲಕ್ಕಾಡ್ ಸಮೀಪದ ಎಲಪ್ಪುಲ್ಲಿಯಲ್ಲಿ ಹತ್ಯೆ ಮಾಡಿದ 24 ಗಂಟೆಗಳ ಬಳಿಕ ಇಂದು ಪಾಲಕ್ಕಾಡ್ ಪಟ್ಟಣದ ಮೇಲಮುರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖಂಡನನ್ನು ಹತ್ಯೆ ಮಾಡಲಾಗಿದೆ.
ಇಂದು ಮಧ್ಯಾಹ್ನ ಆರ್ಎಸ್ಎಸ್ ಮಾಜಿ ಶಿಕ್ಷಕ್ ಪ್ರಮುಖ್ ಶ್ರೀನಿವಾಸನ್ ಅವರ ಮೇಲೆ ಐವರು ಸದಸ್ಯರ ತಂಡವು ದಾಳಿ ಮಾಡಿದ್ದು, ದಾಳಿಕೋರರು ಮೂರು ಬೈಕ್ಗಳಲ್ಲಿ ಬಂದು ಶ್ರೀನಿವಾಸನ್ಗೆ ಮಾರಣಾಂತಿಕವಾಗಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಇನ್ನು ತಕ್ಷಣ ಅವರನ್ನು ಪಾಲಕ್ಕಾಡ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರು ಒಂದು ಗಂಟೆಯ ನಂತರ ನಿಧನರಾಗಿದ್ದಾರೆ.
ಎಸ್ಡಿಪಿಐ ಕಾರ್ಯಕರ್ತ ಎ.ಸುಬೈರ್ ಶವ ಅಂತ್ಯಸಂಸ್ಕಾರ ಮಾಡುವ ಮುನ್ನವೇ ಆರ್ಎಸ್ಎಸ್ ಮುಖಂಡನನ್ನು ಹತ್ಯೆ ಮಾಡಿದ್ದು, ಶ್ರೀನಿವಾಸನ್ ಹತ್ಯೆ ಹಿಂದೆ ಎಸ್ಡಿಪಿಐ ಕೈವಾಡವಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.