ಥಾಣೆ, ಏ 16 (DaijiworldNews/MS): ತಯಾರಿಸಿ, ಬಡಿಸಿದ ಉಪಹಾರವೂ ಉಪ್ಪಾಗಿತ್ತು ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಪತ್ನಿಯನ್ನೇ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್ಶಿಪ್ನಲ್ಲಿ ಶುಕ್ರವಾರ ನಡೆದಿದೆ.
ಆರೋಪಿಯನ್ನು 46 ವರ್ಷದ ನಿಲೇಶ್ ಘಾಘ್ ಎಂದು ಗುರುತಿಸಲಾಗಿದೆ. ನಿಲೇಶ್ ಘಾಘ್ ಉಪಹಾರ ಸೇವಿಸಿದ ನಂತರ ಶುಕ್ರವಾರ ಬೆಳಿಗ್ಗೆ 9:30 ರ ಸುಮಾರಿಗೆ ತನ್ನ ಪತ್ನಿ ನಿರ್ಮಲಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ.
" ಬೆಳಗಿನ ಉಪಾಹಾರಕ್ಕಾಗಿ ಆಕೆ ತಯಾರಿಸಿ ಬಡಿಸಿದ ಕಿಚಡಿಯಲ್ಲಿ ಉಪ್ಪಾಗಿತ್ತು ಎಂದು ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ. ಉದ್ದನೆಯ ಬಟ್ಟೆಯ ತುಂಡನ್ನು ಬಳಸಿ ಆಕೆಯನ್ನು ಕೊಂದಿದ್ದಾನೆ" ಎಂದು ಪೊಲೀಸ್ ಅಧಿಕಾರಿ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಮಹಿಳೆಯ ಶವವನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು ಘಟನೆಯ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.