ಚಂಡೀಘಡ, ಏ 16 (DaijiworldNews/DB): ಪಂಜಾಬ್ನ ಪ್ರತಿ ಮನೆಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಸರ್ಕಾರ ಶನಿವಾರ ಘೋಷಿಸಿದೆ.
ನೂತನ ಯೋಜನೆ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಸರ್ಕಾರಕ್ಕೆ ಒಂದು ತಿಂಗಳಾದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಪಂಜಾಬ್ ಆಡಳಿತದಲ್ಲಿ ಇದೊಂದು ಮುಖ್ಯ ಮೈಲಿಗಲ್ಲಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತು ಪಕ್ಷದ ಮುಖಂಡರೊಂದಿಗೆ ಮುಖ್ಯವಾದ ಮಾತುಕತೆ ನಡೆಸಲಾಗಿದೆ. ರಾಜ್ಯದ ಜನತೆಗೆ ಗುಡ್ನ್ಯೂಸ್ ನೀಡುವುದಾಗಿ ಕಳೆದ ಮಂಗಳವಾರವಷ್ಟೇ ಅವರು ಟ್ವೀಟ್ ಮಾಡಿದ್ದರು.
ಪಂಜಾಬ್ನ ಜನತೆ ಪವರ್ ಕಟ್ ಸಮಸ್ಯೆ ಮತ್ತು ನಿಗದಿತ ಬಳಕೆಗಿಂತ ಅಧಿಕ ಬಿಲ್ ಪಾವತಿ ಮಾಡುತ್ತಿರುವ ಬಗ್ಗೆ ಈ ಹಿಂದೆ ಪಕ್ಷದ ಸ್ಥಾಪಕ ಅರವಿಂದ ಕೇಜ್ರೀವಾಲ್ ಅವರು ಮಾತನಾಡಿದ್ದರು.