ಹರಿದ್ವಾರ, (DaijiworldNews/MS): ಸ್ವಾಮಿ ವಿವೇಕಾನಂದರು, ಮಹರ್ಷಿ ಅರಬಿಂದೋ ಅವರು ಕಂಡ "ಅಖಂಡ ಭಾರತದ ಕನಸು ಶೀಘ್ರದಲ್ಲೇ ನಿಜವಾಗಲಿದೆ" ಎಂಬ ವಿಶ್ವಾಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ಅಖಾಡ ಪರಿಷತ್ ಅಧ್ಯಕ್ಷ ಸ್ವಾಮಿ ರವೀಂದ್ರ ಪುರಿ ಅವರು ಹರಿದ್ವಾರದಲ್ಲಿ ಸಾಧು- ಸಂತರನ್ನು ಉದ್ದೇಶಿಸಿ ಮಾತನಾಡುವಾಗ ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಸ್ವಾಮಿ ರವೀಂದ್ರ ಪುರಿ (ಮಹಾನಿರ್ವಾಣಿ ಅಖಾರದ) ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ.
“ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಮುಂದಿನ 20-25 ವರ್ಷಗಳಲ್ಲಿ ಅಖಂಡ ಭಾರತದ ಕನಸು ನನಸಾಗಲಿದೆ’ ಎಂದಿದ್ದರು ಆದರೆ 20-25 ವರ್ಷಗಳು ಎನ್ನುವುದು ನನ್ನ ಪ್ರಕಾರ ಬಲು ಸುದೀರ್ಘ. ನಾವು ನಮ್ಮ ಕಾರ್ಯದ ವೇಗ ಹೆಚ್ಚಿಸಿದ್ದೇ ಆದಲ್ಲಿ, ಅಖಂಡ ಭಾರತವಾಗಲು 10- 15 ವರ್ಷಗಳು ಸಾಕು. ಈ ಅವಧಿಯೊಳಗೆ ನಾವು ಸ್ವಾಮಿ ವಿವೇಕಾನಂದರ, ಮಹರ್ಷಿ ಅರಬಿಂದೋರ ಕನಸನ್ನು ತಲುಪಲಿದ್ದೇವೆ’ ಎಂದು ಹೇಳಿದ್ದಾರೆ.
ಮಹರ್ಷಿ ಅರಬಿಂದೋ ಅವರಂತಹ ದಾರ್ಶನಿಕರು ಹೇಳಿದಂತೆ ಭಗವಾನ್ ಕೃಷ್ಣನ ಆಶಯದಂತೆ ಭಾರತವು ಉದಯಿಸುತ್ತದೆ. "ಭಾರತದ ಬಗ್ಗೆ ಸ್ವಾಮಿ ವಿವೇಕಾನಂದರು ಮತ್ತು ಮಹರ್ಷಿ ಅರಬಿಂದೋ ಹೇಳುವುದರಲ್ಲಿ ನನಗೆ ಯಾವಾಗಲೂ ಸಂಪೂರ್ಣ ನಂಬಿಕೆ ಇದೆ. ಆದರೆ ಇದನ್ನು ಜ್ಯೋತಿಷ್ಯದ ಆಧಾರದ ಮೇಲೆ ಮಾಡಿಲ್ಲ
ನಾನು ನನ್ನ ಸ್ವಂತ ಲೆಕ್ಕಾಚಾರದ ಆಧಾರದಲ್ಲಿ ಹೇಳಿದ್ದೇನೆ ಎಂದರು.
ಸ್ವಾಮಿ ವಿವೇಕಾನಂದರು ಧರ್ಮವೇ ಭಾರತದ ಜೀವಾಳ ಎಂದಿದ್ದರು. ಧರ್ಮದ ಅಭಿವೃದ್ಧಿ ಇಲ್ಲದೆ, ಭಾರತದ ಅಭಿವೃದ್ಧಿ ಅಸಾಧ್ಯ. ಹಿಂದೂರಾಷ್ಟ್ರದ ಕನಸು ಕೈಗೂಡಿದಾಗ ಮಾತ್ರವೇ ಭಾರತ ಪ್ರಗತಿ ಸಾಧ್ಯ’ ಎಂದು ಇದೇ ವೇಳೆ ಪ್ರತಿಪಾದಿಸಿದರು.