ಮಳವಳ್ಳಿ, ಏ 15 (DaijiworldNews/HR): ಒಂದು ಧರ್ಮ ಉಳಿವಿಗಾಗಿ ಅನ್ಯಧರ್ಮಗಳವನ್ನು ನಾಶ ಮಾಡುವ ಹುನ್ನಾರದ ಮೂಲಕ ಸರ್ವ ಜನಾಂಗದ ಶಾಂತಿ ತೋಟಕ್ಕೆ ಬೆಂಕಿ ಹಚ್ಚಲು ಹೊರಟಿರುವ ವ್ಯಕ್ತಿಗಳ ವಿರುದ್ದ ನಾಡಿನ ಜನತೆ ಎಚ್ಚರಗೊಳ್ಳಬೇಕಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಧಿಕಾರಕ್ಕಾಗಿ ಕ್ಷುಲಕ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಂಶಾತಿ ಉಂಟು ಮಾಡಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಿ, ಸಂವಿಧಾನದ ಶಕ್ತಿಯನ್ನುಬಳಸಿಕೊಂಡು ಸಮಾಜ ಹಾಳುಮಾಡುವ ವ್ಯಕ್ತಿಗಳನ್ನು ಬಹಿಷ್ಕರಿಸಬೇಕು ಎಂದರು.
ಇನ್ನು ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತಿರುವ ಜನರು ಸ್ಥಳೀಯ ಪ್ರದೇಶೀಕ ಪಕ್ಷದ ಕಡೆಗೆ ಮುಖ ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೂ 123 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಸ್ವತಂತ್ರವಾಗಿ ಅಕಾರ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.