ಅರುಣಾಚಲಪ್ರದೇಶ, ಏ 15 (DaijiworldNews/DB): ಅರುಣಾಚಲ ಪ್ರದೇಶದ ಪಂಗಿನ್ ಪ್ರದೇಶದ ಉತ್ತರ ಭಾಗದಲ್ಲಿ ಶುಕ್ರವಾರ ನಸುಕಿನ ವೇಳೆಗೆ ಭೂಕಂಪನದ ಅನುಭವವಾಗಿದೆ.
ಬೆಳಗ್ಗೆ 6.56ಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ಪ್ರಮಾಣ 5.3 ತೀವ್ರತೆ ಎಂದು ದಾಖಲಾಗಿದೆ. ಉತ್ತರ ಭಾಗದ ಸುಮಾರು 1176 ಕಿಮೀ ದೂರದಲ್ಲಿ ಭೂಕಂಪ ಉಂಟಾಗಿದೆ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳ್ಳಂಬೆಳಗೆ ಭೂಮಿ ಕಂಪಿಸಿದ್ದರಿಂದ ಜನ ಭಯಭೀತರಾಗಿದ್ದಾರೆ. ಆದರೆ ಸದ್ಯದ ಮಾಹಿತಿಯಂತೆ ಯಾವುದೇ ಆಸ್ತಿಪಾಸ್ತಿ ಮತ್ತು ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.