ಬೆಂಗಳೂರು, ಏ 14 (DaijiworldNews/SM): ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಸ್ವಯಂಪ್ರೇರಿತವೇ ಹೊರತು, ಒತ್ತಡದ ರಾಜೀನಾಮೆಯಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಇಂದು ಸಂಜೆ ಈಶ್ವರಪ್ಪ ನನಗೆ ದೂರವಾಣಿ ಕರೆ ಮಾಡಿದ್ದರು. ಆ ವೇಳೆ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಇದನ್ನು ಅಂಗೀಕರಿಸಲಾಗಿದೆಯೇ ಹೊರತು ಯಾವುದೇ ಒತ್ತಡವನ್ನು ಪಕ್ಷ ಅವರಿಗೆ ಹೊರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.