ಮೈನ್ಪುರಿ, ಏ 13 (DaijiworldNews/HR): ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಶಿಕ್ಷಕಿಯೊಬ್ಬರ ಬಳಿ ದೇಶಿ ನಿರ್ಮಿತ ಪಿಸ್ತೂಲ್ ಪತ್ತೆಯಾಗಿರುವ ಘಟನೆ ನಡೆದಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿದೆ.
ಬಂಧಿತ ಶಿಕ್ಷಕಿಯನ್ನು ಕೃಷ್ಣಮಾ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ.
ಈಕೆ ಫಿರೋಜಾಬಾದ್ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು,ಕೆಲಸದ ಮೇಲೆ ನಿನ್ನೆ ಮೈನ್ಪುರಿಗೆ ಬಂದಿರುವಾಗ ಪಿಸ್ತೂಲ್ ಪತ್ತೆಯಾಗಿದೆ.
ಇನ್ನು ಮಹಿಳೆಯೊಬ್ಬಳು ಪಿಸ್ತೂಲ್ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಳೆ ಎಂಬ ಮಾಹಿತಿ ದೊರೆತ ಬೆನ್ನಲ್ಲೇ ಪೊಲೀಸರು ಆಕೆಯನ್ನು ಹುಡುಕಾಡಿ ಪಿಸ್ತೂಲ್ ಮತ್ತು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದು, ಶಿಕ್ಷಕಿಯ ಜೇಬಿನಿಂದ 315 ಬೋರ್ ದೇಶಿ ನಿರ್ಮಿತ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.