ಬೆಂಗಳೂರು, ಏ 12 (DaijiworldNNews/HR): ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಕ್ತ ಭಾರತಕ್ಕೆ ಕರೆ ನೀಡಿ ಪೇಚೆಗೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಸಿದ್ದರಾಮಯ್ಯ ಅವರು ಆಡಳಿತದಲ್ಲಿರುವ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎಂದು ಹೇಳಿ ಬಳಿಕ ಕ್ಷಮಿಸಿ ಬಿಜೆಪಿ ಮುಕ್ತ ಭಾರತ ಎಂದು ಹೇಳಲು ಹೋಗಿ ಕಾಂಗ್ರೆಸ್ ಮುಕ್ತ ಅಂದು ಬಿಟ್ಟೆ ಎಂದಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಿದ್ದರಾಮಯ್ಯ ಅವರು ಕರೆ ನೀಡುತ್ತಿದ್ದಂತೆ ಅವರ ವೇದಿಕೆಯ ಮುಂಭಾಗದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಳ್ಳ ತೊಡಗಿದರು.
ಇನ್ನು ತಕ್ಷಣ ಸಿದ್ದರಾಮಯ್ಯ ಕ್ಷಮಿಸಿ ಅಂತಹದ್ದೇನು ತಪ್ಪಾಗಿಲ್ಲ ಎಂದು ಹೇಳಿ ಮತ್ತೆ ಮಾತು ಮುಂದುವರಿಸಿದ್ದಾರೆ.