ಬೆಂಗಳೂರು, ಏ 11 (DaijiworldNews/HR): ಬಿಜೆಪಿ ಸರ್ಕಾರ ಅಂದರೆ ಅದು ಸುಳ್ಳಿನ ಕಾರ್ಖಾನೆ. ಸ್ವಾತಂತ್ರ್ಯ ಭಾರತದ ನಂತರ ಹಲವಾರು ಪ್ರಧಾನಿಗಳು ಬಂದರೂ, ಮೋದಿಯಷ್ಟು ಸುಳ್ಳು ಹೇಳುವವರು ಯಾರೂ ಬರಲಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಲೆ ಏರಿಕೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದು, ಅದಕ್ಕೆ ಕಾಂಗ್ರೆಸ್ ದೇಶಾದ್ಯಂತ ಹೋರಾಟ ಮಾಡುತ್ತಿದೆ. ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ ಇದೇ ಮೋದಿ ನೇತೃತ್ವದಲ್ಲಿ ಸ್ವಲ್ಪ ಬೆಲೆ ಹೆಚ್ಚಾದರೂ ಹೋರಾಟ ಮಾಡುತ್ತಿದ್ದರು. ಮನಮೋಹನ್ ಸಿಂಗ್ ಸರ್ಕಾರವನ್ನು ಕಟುವಾಗಿ ಮಾತಾಡಿದ್ದರು ಎಂದರು.
ಇನ್ನು ಮೋದಿ ಅವರೇ ಒಳ್ಳೆಯ ದಿನ ಬಂತೆ? ಮಹಿಳೆಯರಿಗೆ, ಯುವಕರಿಗೆ ಒಳ್ಳೆಯ ದಿನ ಬಂತೆ? ಎಂಡು ವರ್ಷದಲ್ಲಿ ನೀವು ಯಾವುದನ್ನು ಈಡೆರಿಸಿದ್ದೀರಿ ತೋರಿಸಿ. ಯಾಕೆ ಬೆಲೆ ಏರಿಕೆ ಎಂದು ಕೇಳಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಹೆಚ್ಚಾಗಿದೆ ಎನ್ನುತ್ತಾರೆ. ಹಾಗಾದ್ರೆ ಮನಮೋಹನ್ ಸಿಂಗ್ ಕಾಲದಲ್ಲಿ ಯಾಕೆ ಬೆಲೆ ಏರಿಕೆಯಾಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.