ಬೆಂಗಳೂರು, ಏ 11 (DaijiworldNews/HR): ನಾವು ಪಾಕಿಸ್ತಾನದಿಂದ ಬಂದ ಮುಸಲ್ಮಾನರು. ನಾವು ಭಾರತೀಯ ಮುಸ್ಲಿಮರು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಗೌರವದಿಂದ ಬದುಕುತ್ತಿದ್ದೇವೆ. ನಾವು ಪಾಕಿಸ್ತಾನದಿಂದ ಬಂದಿಲ್ಲ. ಆಡಳಿತಾರೂಢ ಬಿಜೆಪಿ ಸಾವಿನಲ್ಲೂ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಚಂದ್ರು ಹತ್ಯೆ ಪ್ರಕರಣವನ್ನು ಮತ ಬ್ಯಾಂಕ್ಗಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿರುವ ಅವರು, ಬಿಜೆಪಿಯ ವಾತಾವರಣವನ್ನು ಕೆಡಿಸಲು ನಾನು ಬಿಡುವುದಿಲ್ಲ, ಹತ್ಯೆಯ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಇನ್ನೂ ಕೋಮು ಕಾರ್ಡ್ ಆಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.