ಅಮರಾವತಿ, ಏ. 10 (DaijiworldNews/SM): ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹೊಸ ಸಚಿವ ಸಂಪುಟ ರೆಡಿಯಾಗಿದ್ದು, ನಾಳೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಆರಂಭದಲ್ಲೇ ಹೇಳಿದಂತೆ ಸಿಎಂ ಜಗನ್ ಮೋಹನ್ ರೆಡ್ಡಿಯವರು ಸರಕಾರದ ಅರ್ಧ ಅವಧಿ ಪೂರ್ಣಗೊಂಡಾಗ ಸಚಿವ ಸಂಪುಟ ಪುನರಚಿಸುವುದಾಗಿ ತಿಳಿಸಿದ್ದರು. ಅದರಂತೆ ಗುರುವಾರದಂದು ಈ ಹಿಂದಿನ ಸಚಿವರುಗಳಿಂದ ರಾಜೀನಾಮೆ ಪಡೆಯಲಾಗಿತ್ತು. ಇದೀಗ ಹೊಸಬರು ಸಂಪುಟ ಸೇರ್ಪಡೆಗೊಳ್ಳುತ್ತಿದ್ದಾರೆ.
ಇನ್ನು ಈ ಹಿಂದಿನ ಸಂಪುಟದ ಏಳರಿಂದ ಹತ್ತು ಸಚಿವರನ್ನು ನೂತನ ಸಂಪುಟದಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದ್ದು, ಸೋಮವಾರದಂದು ಸಂಪೂರ್ಣ ಚಿತ್ರಣ ಲಭಿಸಲಿದೆ.