ವಿಜಯನಗರ, ಏ 10 (DaijiworldNews/DB): ಬಿಜೆಪಿ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ150 ಸ್ಥಾನ ಗೆಲ್ಲಬೇಕು. ಇದಕ್ಕಾಗಿ ನಾನೂ ಕೂಡಾ ತೊಡಗಿಸಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಶಾಸಕ ಕರುಣಾಕರ ರೆಡ್ಡಿ ಜನ್ಮದಿನದ ಪ್ರಯುಕ್ತ ಇಲ್ಲಿ ನಡೆದ ಸೀತಾರಾಮ ಕಲ್ಯಾಣ ಉತ್ಸವದಲ್ಲಿ ಭಾಗವಹಿಸಿ ಭಾನುವಾರ ಮಾತನಾಡಿದ ಅವರು, ನನಗೆ ಮಂತ್ರಿಗಿರಿಯ ಆಸೆ ಇಲ್ಲ. ಈ ಹಿಂದೆ ಬಿಎಸ್ ವೈ ಸಿಎಂ ಆಗಬೇಕೆಂದು ಶ್ರಮಪಟ್ಟಿದ್ದೆ. ಈ ಬಾರಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ನಿರಂತರ ಶ್ರಮಿಸಲಾಗುವುದು ಎಂದರು.
ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂದಿನ ಸಲ ಶಾಸಕ ಕರುಣಾಕರ ರೆಡ್ಡಿ ಅವರನ್ನು ಸಚಿವ ಸ್ಥಾನದಲ್ಲಿ ನೋಡಬೇಕು. ಅವರೊಂದಿಗೆ ಹಗಲು ರಾತ್ರಿ ಶ್ರಮಿಸುವುದಾಗಿ ಇದೇ ವೇಳೆ ಅವರು ತಿಳಿಸಿದರು.