ಬೆಂಗಳೂರು, ಏ 10 DaijiworldNews/HR): ಬಿಜೆಪಿ ಸರ್ಕಾರದಿಂದ ಲಾ ಅಂಡ್ ಆರ್ಡರ್ ಕಂಟ್ರೋಲ್ ಮಾಡೋದಕ್ಕೆ ಆಗ್ತಾ ಇಲ್ಲ. ಹೋಮ್ ಮಿನಿಸ್ಟರ್ ಅಸಮರ್ಥರು, ಇವರಿಗೆ ಕಾನೂನು ಸುವ್ಯವಸ್ಥೆ ಕಾಪಾಡೋಕ್ಕೆ ಆಗಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮತ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳೋದಕ್ಕೆ ರಾಜ್ಯದಲ್ಲಿ ಕೋಮು ಸೌಹಾರ್ಧ ಕದಡೋ ಕೆಲಸ ಮಾಡಲಾಗುತ್ತಿದೆ. ಹೀಗೆ ಆದ್ರೇ ರಾಜ್ಯದ ಬೆಳವಣಿಗೆಗೆ ಕುಂಟಿತವಾಗಲಿದೆ ಎಂದರು.
ಇನ್ನು ಚಂದ್ರು ಹತ್ಯೆ ಪ್ರಕರಣದಲ್ಲಿ ಹೋಮ್ ಮಿನಿಸ್ಟರ್ ಅಸಮರ್ಥರು. ಕಮೀಷನರ್, ಸಿ ಟಿ ರವಿ, ರವಿಕುಮಾರ್ ಒಂದೊಂದು ಹೇಳಿಕೆ ಕೊಡ್ತಾರೆ. ಬಿಜೆಪಿ ಹಿಂದೂಗಳನ್ನ ಪ್ರವೋಕ್ ಮಾಡೋಕ್ಕೆ ಹೊರಟ್ಟಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡೋಕ್ಕೆ ಇವರಿಗೆ ಆಗಲ್ಲ. ಹೀಗೆ ಆದ್ರೆ ರಾಜ್ಯ ಬೆಳವಣಿಗೆ ಆಗಲ್ಲ ಎಂದು ಹೇಳಿದ್ದಾರೆ.