ಶಿವಮೊಗ್ಗ, ಏ 10 (DaijiworldNews/DB): ರಾಜ್ಯದಲ್ಲಿ ಶಾಸಕರಿಗೆ ನೀಡಲಾಗಿರುವ ಗನ್ ಮ್ಯಾನ್ ವ್ಯವಸ್ಥೆಯನ್ನು ಸರ್ಕಾರ ಹಿಂತೆಗೆದುಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಗನ್ ಮ್ಯಾನ್ ವ್ಯವಸ್ಥೆ ಅಗತ್ಯ ಇಲ್ಲ. ರಿಸರ್ವ್ ಪೊಲೀಸರನ್ನು ಶಾಸಕರಿಗೆ ಗನ್ ಮ್ಯಾನ್ ಗಳಾಗಿ ಬಳಸಿಕೊಳ್ಳುವುದು ಸಮಂಜಸವಲ್ಲ ಎಂದರು.
ಜನಪ್ರತಿನಿಧಿಗಳಿರುವುದು ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವುದಕ್ಕೆ. ಅವರು ಮುಕ್ತವಾಗಿ ಜನರೊಂದಿಗೆ ಬೆರೆಯಬೇಕು. ಗನ್ ಮ್ಯಾನ್ ಇರಿಸಿಕೊಳ್ಳುವ ಶಾಸಕರಿಂದ ಜನರ ಕಲ್ಯಾಣ ಸಾಧ್ಯವಾಗುವುದಿಲ್ಲ. ಆದರೆ ಯಾರಿಗಾದರೂ ಜೀವಭಯವಿದ್ದರೆ ಮಾತ್ರ ಸರ್ಕಾರ ಭದ್ರತೆ ಕಲ್ಪಿಸಲಿ ಎಂದವರು ತಿಳಿಸಿದರು.