ನವದೆಹಲಿ, ಏ 10 (DaijiworldNews/DB): ಇಂಗ್ಲಿಷ್ ಬದಲು ಹಿಂದಿ ಮಾತನಾಡು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ 'ತಮಿಳು ನಮ್ಮ ಅಸ್ತಿತ್ವದ ಮೂಲ' ಎಂಬುದಾಗಿ ಟ್ವೀಟ್ ಮಾಡುವ ಮೂಲಕ ಗೃಹ ಸಚಿವರಿಗೆ ಟಾಂಗ್ ನೀಡಿದ್ದಾರೆ.
ಅಮಿತ್ ಶಾ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ರೆಹಮಾನ್ ಟ್ವೀಟ್ ಮಾಡಿದ್ದು, ವಿವಾದ ಮತ್ತಷ್ಟು ಹೆಚ್ಚಾಗಿದೆ. ಶನಿವಾರ ರಾತ್ರಿ 11 ಗಂಟೆಗೆ ಟ್ವೀಟ್ ಮಾಡಿದ ರೆಹಮಾನ್ ತಮಿಳು ನಮ್ಮ ಅಸ್ತಿತ್ವದ ಮೂಲ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಸುಮಾರು 13,000ಕ್ಕಿಂತ ಹೆಚ್ಚು ರೀಟ್ವೀಟ್ ಆಗಿದೆ.
ಟ್ವಿಟ್ಟರ್ನಲ್ಲಿ ತಮಿಳು ದೇವತೆ ಚಿತ್ರವನ್ನು ಹಂಚಿಕೊಂಡು, ಆಧುನಿಕ ತಮಿಳು ಕವಿ ಭಾರತಿದಾಸನ್ ಅವರ ವಿರಚಿತ ಸಾಲೊಂದನ್ನು ಹಂಚಿಕೊಂಡಿದ್ದರು.