ದೆಹಲಿ, ಏ 09 (DaijiworldNews/HR): ಬಾಲಿವುಡ್ ನಟಿ ಸೋನಮ್ ಕಪೂರ್ ನಿವಾಸಕ್ಕೆ ಕಳ್ಳರು ನುಗ್ಗಿ 2.4 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಗರ್ಭಿಣಿಯಾಗಿರುವ ಸೋನಂ ಕಪೂರ್ ಮತ್ತು ಪತಿ ಆನಂದ್ ಅಹುಜಾ ಅವರ ದೆಹಲಿಯ ಮನೆಯಲ್ಲಿ ಫೆಬ್ರವರಿ 11 ರಂದು ಕಳ್ಳತನವಾಗಿದ್ದು, ಎರಡು ದಿನಗಳ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ನಡೆದು ಸುಮಾರು ಎರಡು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಇತ್ತೀಚೆಗಷ್ಟೇ ಸೋನಮ್ ಕಪೂರ್ ಅವರ ಮಾವನನ್ನು ಸೈಬರ್ ಕ್ರಿಮಿನಲ್ ಗಳು 27 ಲಕ್ಷ ರೂ. ವಂಚಿಸಿದ್ದರು.