ಹೈದರಾಬಾದ್, ಏ 09 (DaijiworldNews/HR): ಟಾಲಿವುಡ್ನ ಹಿರಿಯ ನಟ ಮನ್ನವ ಬಾಲಯ್ಯ(92) ಅವರು ಶನಿವಾರ ತೆಲಂಗಾಣದ ಹೈದರಾಬಾದ್ನ ಯೂಸುಫ್ಗುಡದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮನ್ನವ ಬಾಲಯ್ಯ ಅವರು 1930 ರಲ್ಲಿ ಏಪ್ರಿಲ್ 9 ರಂದು ಜನಿಸಿದ್ದು, ಮಲ್ಲಿಶ್ವರಿ , ಅನ್ನಮಯ್ಯ ಸೇರಿದಂತೆ ಅನೇಕ ತೆಲುಗಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಮತ್ತು 300 ಕ್ಕೂ ಅಧಿಕ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಮನ್ನವ ಬಾಲಯ್ಯ ಅವರು ಕೇವಲ ನಟನೆ ಅಲ್ಲದೇ ನಿರ್ದೇಶಕ , ನಿರ್ಮಾಪಕ , ಬರಹಗಾರ ನಾಗಿಯೂ ಗುರುತಿಸಿಕೊಂಡಿದ್ದಾರೆ.
ಅನೇಕ ಸೆಲೆಬ್ರಿಟಿಗಳು, ನಟರು, ಚಲನಚಿತ್ರ ನಿರ್ಮಾಪಕರು, ಗಾಯಕರು ಸೇರಿದಂತೆ ಚಿತ್ರರಂಗದ ಬಂಧುಗಳು ನಟ ಮನ್ನವ ಬಾಲಯ್ಯ ಅವರ ನಿಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.