ಚಿತ್ರದುರ್ಗ, ಏ 09 (DaijiworldNews/HR): ಭಾರತದ ರಾಷ್ಟ್ರ ಭಾಷೆ ಹಿಂದಿ ಅನ್ನೋದು ಎಲ್ಲರಿಗೂ ಗೊತ್ತಿದೆ, ಹಾಗಾಗಿ ಹಿಂದಿಯನ್ನು ಅಳವಡಿಸಿಕೊಂಡ್ರೆ ತಪ್ಪೇನಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟೀಷರ ಇಂಗ್ಲಿಷ್ ಮೇಲೆ ಪ್ರೀತಿ ಇದೆ, ಹಿಂದಿ ಭಾಷೆ ಮೇಲೆ ಪ್ರೀತಿ ಇಲ್ವಾ? ಹಿಂದಿಯನ್ನು ಅಳವಡಿಸಿಕೊಂಡ್ರೆ ತಪ್ಪೇನಿಲ್ಲ. ಹಿಂದಿಯೊಂದಿಗೆ ನಮ್ಮ ಭಾಷೆ ಕನ್ನಡ ಸಹ ಇರುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭಾಷೆ ಪಾಲನೆ ಮಾಡಿ ಅನ್ನೋ ಹೇಳಿಕೆ ನನಗೆ ತಪ್ಪು ಅನ್ನಿಸಲ್ಲ ಎಂದರು.
ಇನ್ನು ದೇಶದಲ್ಲಿ ಹಿಂದಿ ಭಾಷೆ ಹೇರಿಕೆ ಅನ್ನೋದು ಸಾಂಸ್ಕೃತಿಕ ಭಯೋತ್ಪಾದನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಎಲ್ಲಾ ದೃಷ್ಟಿಯಲ್ಲೂ ಭಯೋತ್ಪಾದನೆಯೇ ಮೊದಲು ಎನಿಸಿದೆ. ಅವರು ಭಯೋತ್ಪಾದಕರ ನೆರಳಲ್ಲಿ ಬದುಕುತ್ತಿರುವುದರಿಂದ ಎಲ್ಲವೂ ಭಯೋತ್ಪಾದನೆಯಾಗಿ ಕಾಣುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.